ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಪಾಲಿಸಿ..
|
ಜಗತ್ತಿನಲ್ಲಿ ಅತೀಹೆಚ್ಚು ಇಷ್ಟಪಡುವ ವಸ್ತು ಅಂದ್ರೆ ಅದು ಹಣವೇ ಇರಬೇಕು. ಅದಕ್ಕಾಗಿ ಹಣ ಕಂಡರೆ ಹೆಣ ಕೂಡ ಬಾಯಿ ಬಿಡತ್ತೆ ಅಂತಾ ಹೇಳಿದ್ದು! ಜೀವನದಲ್ಲಿ ಉತ್ತಮ ಸೌಲಭ್ಯ, ಆರೋಗ್ಯ, ಶಿಕ್ಷಣ, ಆಹಾರ ಪಡೆಯಲು ಹಣ ಬೇಕೆ ಬೇಕು.
ಆದರೆ ಕೆಲವರ ಕೈಯಲ್ಲಿ ಹಣವೇ ನಿಲ್ಲುವುದಿಲ್ಲ. ಎಷ್ಟೇ ದುಡಿದರೂ ಹಣ ನೀರಿನಂತೆ ಖರ್ಚಾಗುತ್ತಿರುತ್ತದೆ. ಉತ್ತಮ ಉದ್ಯೋಗ, ವ್ಯವಹಾರ ಇದ್ದು ಕೈತುಂಬಾ ಹಣ ಬರುತ್ತಿದದ್ದರು ಮನೆಯಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದಿಲ್ಲ. ಪರ್ಸ್/ಜೇಬಿನಲ್ಲಿ ಈ ವಸ್ತುಗಳನ್ನಿಟ್ಟರೆ ಹಣಕಾಸು ನಷ್ಟ ಗ್ಯಾರಂಟಿ
ಇದಕ್ಕೆ ಮನೆಯ ವಾಸ್ತು ಕೂಡ ಕಾರಣವಾಗಿರುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಏನು ಮಾಡಬೇಕು ಎಂಬ ಚಿಂತೆ ಇರುತ್ತದೆ ಅಲ್ಲವೆ? ಹಾಗಿದ್ದರೆ ಮುಂದೆ ಓದಿ..
ಲಕ್ಷ್ಮೀ ಕುಬೇರರ ಪಟದ ಮಹತ್ವ
ನಿಮ್ಮ ಮನೆಯ ಹೊಸ್ತಿಲು ದಾಟಿ ಒಳಗಡೆ ಕಾಲಿಡುತ್ತಿದ್ದಂತೆ ಕಾಣುವಂತೆ ಗೊಡೆಯ ಮೇಲೆ ಲಕ್ಷ್ಮೀ ಕುಬೇರರ ಪಟ ಇಡಬೇಕು. ಒಂದೇ ಪಟದಲ್ಲಿರುವ ಅಥವಾ ಪ್ರತ್ಯೇಕವಾದ ಎರಡು ಪಟಗಳನ್ನು ಇರಿಸಬಹುದು. ಪರ್ಸ್/ವಾಲೆಟ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಬೇಡಿ...
ಸ್ವಸ್ತಿಕ್
ಲಕ್ಷ್ಮೀ ಕುಬೇರರ ಪಟದ ಜತೆಯಲ್ಲಿ ಸ್ವಸ್ತಿಕ್ ಚಿನ್ನೆಯ ಒಂದು ಪಟವನ್ನು ಇಡಬೇಕು. ಇದರಿಂದ ಮನೆಗೆ ಧನಾಗಮನ ಹಾಗು ಹಣ ಉಳಿತಾಯ ಆಗುತ್ತದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
ದೇವರ ಕೊಣೆ
ಮನೆಯಲ್ಲಿ ದೇವರ ಕೊಣೆ ತುಂಬಾ ಪ್ರಾಮುಖ್ಯತೆ ಪಡೆದಿದೆ. ದೇವರ ಕೊಣೆಯ ನಿರ್ಮಾಣಕ್ಕೆ ವಾಯವ್ಯ ದಿಕ್ಕು ತುಂಬಾ ಪ್ರಾಶಸ್ತ್ಯವಾದದ್ದು. ಇದನ್ನು ದೇವತೆಗಳ ನೆಲೆಸಿರುವ ದಿಕ್ಕು ಎನ್ನಲಾಗಿದೆ.
ಹನುಮಾನ್ ವಿಗ್ರಹ
ಪಂಚಮುಖಿ ಹನುಮಂತನ ವಿಗ್ರಹವನ್ನು ಮನೆಯ ನೈರುತ್ಯ ದಿಕ್ಕಿನಲ್ಲಿ ಇರಿಸಬೇಕು. ಇದು ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಿಸುವ ಜೊತೆಗೆ ಮನೆಗೆ ಧನಾಗಮನಕ್ಕೆ ಸಹಕಾರಿಯಾಗುತ್ತದೆ ಎಂದು ನಂಬಲಾಗಿದೆ.
ಒಲೆ
ಗ್ಯಾಸ್ ಒಲೆ ಅಥವಾ ಒಲೆಯನ್ನು ಮನೆಯ ಆಗ್ನೇಯ ಭಾಗದಲ್ಲಿ ಇಡಬೇಕು. ಉತ್ತರ ಭಾಗದಲ್ಲಿ ಎಂದಿಗೂ ಇಡಬಾರದು. ಇದರಿಂದ ಮನೆಗೆ ಆಗಮಿಸುವ ಧನಾತ್ಮಕ ಶಕ್ತಿ ಬೆಂಕಿ ದಹಿಸಿ ಬಿಡುತ್ತದೆ.
ಕಸ ಪೊರಕೆ
ಮನೆಯ ಸ್ವಚ್ಛತೆಗಾಗಿ ದಿನನಿತ್ಯ ಬಳಸುವ ಪೊರಕೆ ಕೂಡ ಮಹತ್ವದ ಪಾತ್ರ ವಹಿಸುತ್ತದೆ. ಪೊರಕೆಯಾಗಲಿ ಅಥವಾ ಪಾದರಕ್ಷೆಗಳನ್ನು ಮೆಟ್ಟಿಲ ಕೆಳಗೆ ಇಡಬಾರದು. ಮೆಟ್ಟಿಲ ಕೆಳಗಡೆ ಚಲನೆಗೆ ಅಡ್ಡಿಯಾಗುವಂತೆ ವಸ್ತುಗಳನ್ನು ಇಡುಉದು ಮನೆಯಲ್ಲಿ ದಾರಿದ್ರ್ಯಕ್ಕೆ ಕಾರಣವಾಗುತ್ತೆ.
ನಲ್ಲಿಗಳು ತೊಟ್ಟಿಕ್ಕಬಾರದು
ಮನೆಯಲ್ಲಿರಬಹುದು ಇಲ್ಲವೇ ಆಫೀಸ್ ನಲ್ಲಾಗಬಹುದು ನಲ್ಲಿಯಿಂದ ನೀರು ತೊಟ್ಟಿಕ್ಕುತ್ತಿರಬಾರದು. ನಲ್ಲಿಯಿಂದ ನೀರು ಸೋರುತ್ತಿದ್ದರೆ ಅವಾಗಲೇ ಅದನ್ನು ಸರಿಪಡಿಸಬೇಕು. ನೀರು ಪೋಲಾದರೆ ಹಣ ಪೋಲಾದಂತೆ ಎಂದು ತಿಳಿಯಲಾಗಿದೆ.
ಒಣಗಿದ ಹೂಗಳು
ಮನೆಯಲ್ಲಿ ಬಾಡಿದ ಅಥವಾ ಒಣಗಿದ ಹೂಗಳನ್ನು ಇಡಬಾರದು. ಒಣಗಿದ ಹೂಗಳಲ್ಲಿ ಧನಾತ್ಮಕ ಶಕ್ತಿ ಇಲ್ಲದಿರುವುದರಿಂದ ಋಣಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ.
ಕಪಾಟ/ಲಾಕರ್ ದಿಕ್ಕು
ಮನೆ, ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಇಟ್ಟಿರುವ ಲಾಕರ್ ಸದಾ ಉತ್ತರ/ಪೂರ್ವ ದಿಕ್ಕಿನತ್ತ ಮುಖ ಮಾಡಿರುವಂತೆ ಇರಿಸುವುದು ಉತ್ತಮ ಎಂದು ಶಾಸ್ತ್ರ ಹೇಳುತ್ತದೆ. ಇದು ನಿಮ್ಮ ಧನಾಗಮನ, ವಹಿವಾಟು ಲಾಭ ಹೆಚ್ಚ್ಳಕ್ಕೆ ಕಾರಣವಾಗುತ್ತದೆ.
ಮಡಕೆ ಮಹತ್ವ
ಮಣ್ಣಿನ ಮಡಕೆ ಮನೆಯ ಉತ್ತರ ಭಾಗದಲ್ಲಿ ಇಡಬೇಕು. ಮಡಕೆಯನ್ನು ಯಾವುದೇ ಮಿಶ್ರಣವಿರದೆ ಕೇವಲ ಮಣ್ಣಿನಿಂದ ಮಾಡಿರಬೇಕು. ಇದರಿಂದ ಮನೆಗೆ ಆಗಮಿಸುವ ಧನ ಮನೆಯಲ್ಲಿಯೇ ಉಳಿಯುತ್ತದೆ.
ಲಕ್ಷ್ಮೀ ದೇವಿ ಪಟ
ಲಕ್ಷ್ಮೀದೇವಿಯ ಪೋಟೊ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಧನ ಸಂಪತ್ತು ಹೆಚ್ಚಳವಾಗಲು ಪೂಜಾ ಸ್ಥಳದಲ್ಲಿ ಲಕ್ಷ್ಮೀಯ ಪಟ ಇರಿಸಬೇಕು. ಪ್ರತಿದಿನ ಲಕ್ಷ್ಮೀ ದೇವಿಗೆ ಪೂಜೆಯನ್ನು ಸಲ್ಲಿಸಿ. ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಬಡತನ ಹೆಚ್ಚಾಗತ್ತೆ!